Monday, May 31, 2010

Adiಮದಲ್ಲೊಂದು dina
















ನೂರ ಐವತ್ತಕ್ಕೂ ಹೆಚ್ಚಿನ ಮಕ್ಕಳು ನಾಡಿನ ಮೂಲೆ ಮೂಲೆಯಿಂದ ಬಂದರು. ಸುಮಾರು ಹದಿನೈದು ದಿನ ಒಂದೇ ಸೂರಿನಡಿಯಲ್ಲಿ ಉಂಡರು, ಮಲಗಿದರು, ಹಾಡು ಕಲಿತರು, ನಾಟಕ ಕಲಿತರು, ಕರಾಟೆ ಕಲಿತರು, ಚಿತ್ರಕಲೆ ಅರಿತರು.... ಏನೇನೆಲ್ಲ ಮಾಡಿದರು.
ಖ್ಯಾತ ನಿರ್ದೇಶಕ ಪ್ರಮೋದ್ ಶಿಗ್ಗಾವ್ ಅವರಿಗೆ ಜೊತೆಯಾಗಿ ಮಲ್ಲಪ್ಪ ಹೊಂಗಲ್, ವನಜಾಕ್ಷಿ ಕೊಳಗಿ, ಪದ್ಮ ಕೊಡಗು, ಮೋಹನ್ ಮೈಸೂರು. ಸಂಗೀತ ಇಸ್ಮಾಯಿಲ್ ಗೋನಾಳ್. ತೆರೆಯ ಹಿಂದೆ ಪ್ರಶಾಂತ್, ರಾಮಕೃಷ್ಣ ಬೆಳತುರ್, ಸುನಂದಾ, ರಮೇಶ್, ಹರಿ, ಶಿವೂ, ಚಲಪತಿ, ರಾಯಲಪಾದ್ ರಾಘವೇಂದ್ರ ಇನ್ನೂ ಹಲವರು. ಮುಖ್ಯವಾಗಿ ಬೊಳುವಾರು ಅವರ ಪಾಪು ಗಾಂಧಿ ಬಾಪು ಗಾಂಧಿ ಅದಕತೆ ಇತ್ತು. ಕೋಟಿಗಾನಹಳ್ಳಿ ರಾಮಯ್ಯ ಬೆನ್ನಿಗಿದ್ದರು. ಅದಿಮದಲ್ಲಿ ನಾಟ್ಕ ಸಿದ್ದವಾಗಿಯೇ ಬಿತ್ತಿತು.
೨೭ ಮತ್ತು ೨೮ ಮೇ ನಡೆದ ಅದರ ಪ್ರದರ್ಶನಕ್ಕೆ ಕೋಲಾರ ಮತ್ತು ಸುತ್ತಮುತ್ತಲಿನ ನೂರಾರು ಕಲಾಸಕ್ತರು ಹಾಜರಾದರು.